tag line

ಸುಮ್ ಸುಮ್ನೆ................!!!

ಮಂಗಳವಾರ, ನವೆಂಬರ್ 24, 2015

ಅಳುವೆ ಏತಕೆ ಗೆಳೆಯ ಹಳೆಯ ಗೆಳತಿಯ ನೆನೆದು (ಗೀತೆ)


ಅಳುವೆ ಏತಕೆ ಗೆಳೆಯ ಹಳೆಯ ಗೆಳತಿಯ ನೆನೆದು

ಇರುವಾಗ ನಾ ನಿನ್ನ ಜೊತೆ ಎ೦ದು ||ಅಳುವೆ||


ನುಡಿವರೆಲ್ಲ ಚೆ೦ದದಲಿ ನೀ ಬಳಿ ಇರುವಾಗ

ತರದಿ ಜರಿಯುವರು ನೀ ಮರೆಯಾದಾಗ ||

ನಿಜವ ನೀ ತಿಳಿಯದೆಯೇ....

ಈ ನಿಜವ ನೀ ತಿಳಿಯದೆಯೆ

ಅಳುವೆ ಏತಕೆ ಗೆಳೆಯ ಹಳೆಯ ಗೆಳತಿಯ ನೆನೆದು

ಇರುವಾಗ ನಾ ನಿನ್ನ ಜೊತೆ ಎ೦ದು.....||ಅಳುವೆ||


 ಕರೆವರೆಲ್ಲ ಸರದಿಯಲಿ ತಮಗೆ ಬೇಕೆ೦ದಾಗ

ಬಳಿಕ ದೂಡುವರು ಕ೦ಡು ಕಾಣದ ಹಾಗ ||

ಜಗವ ನೀ ಅರಿಯದೆಯೇ....

ಈ ಜಗವ ನೀ ಅರಿಯದೆಯೆ

ಅಳುವೆ ಏತಕೆ ಗೆಳೆಯ ಹಳೆಯ ಗೆಳತಿಯ ನೆನೆದು

ಇರುವಾಗ ನಾ ನಿನ್ನ ಜೊತೆ ಎ೦ದು.....||ಅಳುವೆ||