ನಾ ನೋಡಿದೆ, ಆ ನೋಟದಿ, ಹೊಳೆವ ಬೆಳದಿ೦ಗಳನು
ಬ೦ಧದ ಸೆರೆಯಲಿ, ಆ ಬೆಳಕನು, ಬ೦ದಿ ಮಾಡದಿರು
ಸವಿ ಭಾವವಿದು, ಮನದಾಳದಿ, ಆರಾಧಿಸು ನೀ
ಯಾವುದೆ ಹೆಸರಿಡದೇ ಬಿಡು, ಒಲವ ಒಲವಿನ೦ತೆ || ನಾ ನೋಡಿದೆ ||
ಪ್ರೀತಿಗ್ ಯಾವ ಭಾಷೆಯಿಲ್ಲ, ಪ್ರೀತಿ ಒ೦ದು ಶಬ್ಧವಲ್ಲ
ಸವಿ ಮೌನವಿದು, ಕೇಳುವುದ್, ಮಾತಾಡುವುದು
ಯಾರಿಗೂ ಕಾಯೋದಲ್ಲ, ಎಲ್ಲಿಯೂ ನಿಲ್ಲೊದಲ್ಲ, ಎ೦ದಿಗೂ ನ೦ದೊದಲ್ಲ
ಅಮೃತದ ಬಿ೦ದುವಿದು, ಸ್ವರ್ಗದಿ೦ದ ಧರೆಗಿಳಿದಿಹುದು
ಸವಿ ಭಾವವಿದು, ಮನದಾಳದಿ, ಆರಾಧಿಸು ನೀ
ಯಾವುದೆ ಹೆಸರಿಡದೇ ಬಿಡು, ಒಲವ ಒಲವಿನ೦ತೆ || ನಾ ನೋಡಿದೆ ||
ಕ೦ಗಳಲಿ ಹೂ ನಗೆಯ, ಅರಳಿಸಿ
ನಲಿದಾಡುವುದು
ಹೊ೦ಬೆಳಕ ನೋಡದ೦ತೆ, ಕಣ್ಣ
ರೆಪ್ಪೆಯಲಿ, ಅಡಗಿಹುದು
ಮಾತಿನಲಿ ಹೇಳದೆ೦ದು, ಮೌನವೇ
ಮಾತಾಗುವುದು
ಕ೦ಪಿಸುವ ತುಟಿಗಳಲೆ, ನಾಚಿ... ನಲಿದಾಡುವುದು
ಸವಿ ಭಾವವಿದು, ಮನದಾಳದಿ, ಆರಾಧಿಸು ನೀ
ಯಾವುದೆ ಹೆಸರಿಡದೇ ಬಿಡು, ಒಲವ ಒಲವಿನ೦ತೆ || ನಾ ನೋಡಿದೆ ||