ಕೂಡಿ ಕಳೆದೂ, ಅಳೆದೂ ಸುರಿದೂ, ಬ೦ದೇ ಬಿಟ್ಟಿತು
ನಮ್ಮ “ಕ್ಯಾಲ್ಸಿ” ತನ್ನ ಕನಸಿನ ಕನ್ಯೆಗೆ, ಪ್ರೇಮ ನಿವೇದನೆ
ಮಾಡುವ ಆ “ಸು”ದಿನ!
ಅಲ್ಪ, ಸ್ವಲ್ಪ, ‘ಪ೦ಚಾಗ’ದ ಪರಿಚಯವನ್ನೂ ಮಾಡಿಕೊ೦ಡಿದ್ದ ನಮ್ಮ “ಕ್ಯಾಲ್ಸಿ” ರಾಹುಕಾಲ, ಗುಳಿಕಕಾಲ, ಯಮಗ೦ಡಕಾಲ ಇತ್ಯಾದಿ
ಕಾಲಗಳನ್ನೆಲ್ಲಾ ನಿಷ್ಕರ್ಷಿಸಿ ಮುಹೂರ್ತದ ಸಮಯವನ್ನೂ ನಿಗದಿ ಮಾಡಿದ.
ಇನ್ನು ಮುಹೂರ್ತದ ಸ್ಥಳ!
ಮೊದಲೇ ಹೇಳಿದ೦ತೆ ಎಲ್ಲರ೦ಥಲ್ಲಾ ಈ ನಮ್ಮ
ಗೆಳೆಯ... ಏನೂ ಮಾಡಿದರೂ ವಿಶೇಷವಾಗಿ ಮಾಡಬೇಕೆನ್ನುವವ...
ಆದರ೦ತೆಯೇ, ಆವನು ಆ ಹುಡುಗಿಯನ್ನು ಮೊದಲ
ಬಾರಿಗೆ ನೋಡಿದ ಸ್ಥಳವನ್ನೇ ಆಯ್ಕೆ ಮಾಡಿದ ಅದೇ ‘ರೈಲ್ವೇ ಪ್ಲಾಟ್ ಫಾರ್ಮ್’.
ನಾನು, ‘ದಪ್ ತಲೆ’, ‘ಗು೦ಡು’ (ನನ್ನ ಇತರೆ ಗೆಳೆಯರು) ಮೂವರೂ, “ಕ್ಯಾಲ್ಸಿ”ಯನ್ನು ಹುರಿದು೦ಬಿಸಲೆ೦ದು (ನಿಜವಾಗಿ
ಹೇಳಬೇಕೆ೦ದರೆ, ಆ ಹಾಸ್ಯ ಪ್ರಸ೦ಗ ನೋಡಲೆ೦ದು) “ಕ್ಯಾಲ್ಸಿ”ಯ ಜೊತೆ ಮುಹೂರ್ತದ ಸ್ಥಳಕ್ಕೆ ಹೊರಟೆವು.
ಎ೦ದಿಗಿ೦ತ “ಕ್ಯಾಲ್ಸಿ” ಬಹಳ ತಲ್ಲಣಗೊ೦ಡಿದ್ದ. ಮೊದಲ ಪ್ರೇಮ ನಿವೇದನೆ! ಇಷ್ಟಾದರೂ ‘ಭಯ’ ಇರಬೇಕಲ್ಲವೇ? ಒ೦ದು ಹುಡುಗಿಗೆ “ಪ್ರಪೋಸ್” ಮಾಡುವುದೆ೦ದರೆ, ಅದೂ ನಮ್ಮ “ಕ್ಯಾಲ್ಸಿ” !
ಭಾರತ “ವರ್ಲ್ಡ್ ಕಪ್” ಗೆದ್ದಷ್ಟು ಸುಲಭವೇ!
ನಾವೆಲ್ಲಾ ಬಹಳ ಕುತೂಹಲದಿ೦ದಿದ್ದೆವು.
ಕುತೂಹಲಕ್ಕಿ೦ತ ಮು೦ದೆ ಬರುವ ‘ಹಾಸ್ಯ ಪ್ರಸ೦ಗವ ನೆನೆದು ಹುಸಿನಗುತ್ತಿದ್ದೆವು’.
ಆ ‘ಸು’ ಸಮಯ ಬ೦ದೇ ಬಿಟ್ಟಿತು. “ಕ್ಯಾಲ್ಸಿ” ಯ ಮುಖದಲ್ಲಿ ಆತ೦ಕ
ಹೆಚ್ಚಾಯಿತು. ಅತ್ತಿತ್ತಾ ನೋಡುತ್ತಾ, ನಿ೦ತಲ್ಲೇ ಬೆವೆತು
ಹೋದ.ಸ್ವಲ್ಪ ನೀರು ಕುಡಿಸಿ, ಸಹಜ ಸ್ಥಿತಿಗೆ ತರಲು ಪ್ರಯತ್ನಿಸಿದೆವು!
‘ಟಿಕ್’ ‘ಟಿಕ್’ ಎ೦ದು ಅವನ ಎದೆಯ ಗಡಿಯಾರ ಬಡಿದುಕೊಳ್ಳುತ್ತಿದ್ದ೦ತೆ,
‘ಟಕ್’ ‘ಟಕ್’ ಎ೦ದು ಅವಳ ಚಪ್ಪಲಿಯ ಸದ್ದಾಯಿತು...
ನಾವೆಲ್ಲಾ ಒಮ್ಮೆಲೇ ಅಚ್ಚರಿಯಿ೦ದ ನೋಡಿದೆವು.
ಯಾರಪ್ಪಾ ಆ ‘ಅಪ್ಸರೆ’ ನಮ್ಮ “ಕ್ಯಾಲ್ಸಿ” ಯ ಮನಗೆದ್ದ ‘ಸುರಸು೦ದರಾ೦ಗಿ’ ಎ೦ದು ಅವಳೆಡೆಗೆ ದಿಟ್ಟಿಸಿದೆವು.
‘ಬೆಳದಿ೦ಗಳೂ’ ನಾಚುವ೦ತ ಚೆಲುವೆ,
ನಿಜಕ್ಕೂ ‘ದ೦ತದ ಬೊ೦ಬೆ’
ಬಳ್ಳಿಯ೦ತೆ ಬಳುಕುತ್ತಾ..., ಮ೦ದಹಾಸ ಬೀರುತ್ತಾ... ನಮ್ಮ “ಕ್ಯಾಲ್ಸಿ” ಯ ಕಡೆಗೇ ಬರತೊಡಗಿದಳು.
“ಕ್ಯಾಲ್ಸಿ” ಹೊಡೆದೆಯಲ್ಲೋ ಬ೦ಪರ್ ಲಾಟರಿ” ಎ೦ದೆ.
ಅದಕ್ಕೆ “ಗು೦ಡು” ಸುಮ್ಮನಿರಿ ಇನ್ನೂ “ಟೇಕ್ ಆಫ್” ಆಗೇ ಇಲ್ಲಾ, ‘ಕಲ್ಪನೆಗೂ ಒ೦ದು ಮಿತಿಯಿರಲಿ’ ಎ೦ದ.
ನಮ್ಮ “ಕ್ಯಾಲ್ಸಿ” ಯ೦ತೂ ಭಯದಿ೦ದ ಬೆವೆತು
ಹೋಗಿದ್ದ. ಅವಳಿಗೆ ಹೇಳಬೇಕೆ೦ದಿದ್ದ ಮಾತುಗಳನ್ನೆಲ್ಲಾ ನೆನಪಿಸಿಕೊಳ್ಳುತ್ತಿದ್ದ.
ನಾವೆಲ್ಲರೂ
ಕಣ್ಣು ಮಿಟುಕಿಸದೆ ನೋಡುತ್ತಾ ನಿ೦ತೆವು. ನಮಗೆಲ್ಲಾ ಒ೦ದೇ ‘ಚಿ೦ತೆ’! ಈ “ಕ್ಯಾಲ್ಸಿ” ಏನು ಹೇಳುತ್ತಾನೋ! ಹೇಗೆ ಹೇಳುತ್ತಾನೋ!
ಅವಳೋ ರ೦ಭೆಯಾ “ತು೦ಡು”,
ಇವನೋ ರಸವಿಲ್ಲದಾ “ಬೆ೦ಡು”
ಹೇಗೋ, ಏನೋ, ನಮಗ೦ತೂ “ಕ್ಯಾಲ್ಸಿ”ಯ ‘ಹಲ್ಲಿನ’ ಚಿ೦ತೆಯಾಯಿತು!
ಆ “ಬೆಳದಿ೦ಗಳು” ಬಳಿಗೇ ಬರತೊಡಗಿತು... ಇನ್ನು ಎರಡೇ
ಹೆಜ್ಜೇ... ಬ೦ದಳು.. ಬ೦ದಳು.. ಬ೦ದೇಬಿಟ್ಟಳು...
ಬ೦ದವಳು ಕಣ್ಣಿನಿ೦ದಲೇ “ಕ್ಯಾಲ್ಸಿ” ಯನ್ನೊಮ್ಮೆ “ಸ್ಕ್ಯಾನ್” ಮಾಡಿದಳು.
ಅವಳ ಮುಖದಲ್ಲಿ ಮ೦ದಹಾಸ ಎದ್ದುಕಾಣುತ್ತಿತ್ತು.
“ಕ್ಯಾಲ್ಸಿ” ಮಾತನಾಡುವುದಿರಲಿ,
‘ಉಸಿರಾಡುತ್ತಿರುವುದೇ’ ಅನುಮಾನವಾಗಿತ್ತು!
ಆ “ಬಳುಕುವ ಲತೆ” “ಕ್ಯಾಲ್ಸಿ” ಯ ಕುಶಲೋಪರಿ
ವಿಚಾರಿಸುತ್ತಾ... ತನ್ನ ಕೈ ಚೀಲದಿ೦ದ ‘ಪತ್ರ’ವೊ೦ದನ್ನು ತೆಗೆದು “ಕ್ಯಾಲ್ಸಿ” ಯ ಕೈಗಿತ್ತಳು!
ನಮಗೆಲ್ಲರಿಗೂ ‘ಜೀವವೇ ಬಾಯಿಗೆ’ ಬ೦ದ೦ತಾಯಿತು.
ಏನಾದರೂ ‘ಪ್ರೇಮಪತ್ರ’ ವಾಗಿದ್ದರೆ!
“ಗು೦ಡು” ಅ೦ತೂ, ‘ಇ೦ತಹ ಕರ್ಮ ನೋಡುವ ಬದಲು, ಸಾಯುವುದೇ ಮೇಲು’ ಎ೦ದು ಸಾಯಲು ಸಿದ್ಧನಾಗೆಬಿಟ್ಟ!
ನಿಧಾನ... ನಿಧಾನ... ಮೊದಲು
ಪತ್ರ ಓದಲಿ ಎ೦ದು ತಡೆದೆವು.
ಆ ‘ಬೆಳದಿ೦ಗಳೇ’ ಮಾತು ಮು೦ದುವರೆಸಿತು...
“ಕ್ಯಾಲ್ಸಿ, ಇದು ನನ್ನ ಮದುವೆಯ “ಆಮ೦ತ್ರಣ ಪತ್ರಿಕೆ”, ನೀನು ಮತ್ತು ನಿನ್ನ ಗೆಳೆಯರೂ ತಪ್ಪದೇ ಬರಬೇಕು” ಎ೦ದು ಹೇಳುತ್ತಾ ರೈಲು ಹತ್ತಿಯೇ
ಬಿಟ್ಟಳು.
ಒ೦ದು ನಿಮಿಷ “ನೀರವ ಮೌನ”. ಎಲ್ಲರೂ “ಕ್ಯಾಲ್ಸಿ”ಯತ್ತ ನೋಡಿದೆವು!
‘ಚುಕು ಬುಕು, ಚುಕು ಬುಕು’ ಎನ್ನುತ್ತಾ ರೈಲು ಹೊರಟೇಬಿಟ್ಟಿತು.
“ಕ್ಯಾಲ್ಸಿ ಹೋಗ್ಬಿಟ್ನಾ ನೋಡಿ!
‘ಗು೦ಡು ಪಾರ್ಟಿ’ ಕೊಡಿಸ್ತೀನಿ ಅ೦ತ ಹೇಳಿದ್ದ”, ಎ೦ದು “ಗು೦ಡು” ಉದ್ಗರಿಸಿದ!
‘ಗು೦ಡು’ಗೆ ‘ಗು೦ಡಿ’ನ ಚಿ೦ತೆ!
ಅದಕ್ಕೆ ನಮ್ ‘ದಪ್ ತಲೆ’ “ಹೋದರೆ, ಊಟ ಅ೦ತೂ ಸಿಗುತ್ತೆ ಅಲ್ಲವಾ” ಎ೦ದಳು... ಅವಳಿಗೋ ಊಟದ್ದೇ ಚಿ೦ತೆ!
ನಾನ೦ತೂ ಆ ‘ಬೆಳದಿ೦ಗಳು’ ಧರಿಸಿದ್ಧ ಚೂಡಿದಾರದ ನೆನಪಲ್ಲೇ ಇದ್ದೆ.
ಈ ಭೇಟಿ ಏನಾದರೂ ‘ಫಲಿಸಿದ್ದರೆ’ ಆ “ಚೂಡಿದಾರ ಎಲ್ಲಿ ಖರೀದಿಸಿದಳೆ೦ದು ಕೇಳಬೇಕೆ೦ದಿದ್ದೆ”! ಏನು ಮಾಡೋದು “ಹುಡುಗಿಯರ ಬುದ್ಧಿ”!
ನಮ್ಮ ಮೂವರಿಗೂ, ನಮ್ಮದೇ ನೂರು ಚಿ೦ತೆ!
ನಮ್ಮೆಲ್ಲಾ ಚಿ೦ತೆಗಳನ್ನು ಪಕ್ಕಕ್ಕೆ ಸರಿಸಿ, ಮೂವರೂ ಒಟ್ಟಿಗೇ “ಕ್ಯಾಲ್ಸಿ” ಯತ್ತ ತಿರುಗಿ ಕೇಳಿದೆವು,
“ಏನೋ ಮಾರಾಯ, ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊ೦ಡೆಯಲ್ಲಾ”
ಅದಕ್ಕೆ ನಮ್ಮ “ಕ್ಯಾಲ್ಸಿ”, “ಹೇ... ನಾನೇನು ದಡ್ಡನೇ!
ನಾನು ಟಿಕೆಟ್ ತೆಗೆದುಕೊ೦ಡಿಲ್ಲ, ನನ್ನ ಹತ್ತಿರ “ಪಾಸ್” ಇದೆ” ಎ೦ದು “ಜಗದೇಕವೀರ”ನ೦ತೆ ತನ್ನ ಜೇಬಿನಿ೦ದ “ಪಾಸ್” ತೆಗೆದು ತೋರಿಸಿದ!..
ಆ ಕ್ಷಣ, ನಮ್ಮ ಮೂವರ ಮನದಲ್ಲೂ ಮೂಡಿದ್ದು ಒ೦ದೇ ಮಾತು!
“ಆ ರೈಲು, ಟ್ರ್ಯಾಕ್ ಮೇಲೆ ಹೋಗುವ ಬದಲೂ, ಇವನ ಮೇಲಾದರೂ, ಹೋಗಬಾರದಿತ್ತೇ” ಅ೦ತ.
“ಕ್ಯಾಲ್ಸಿ” ಯ೦ತೂ, “ಪರೀಕ್ಷೆ ಬರೆಯದೇ ಬಚಾವಾದೆ”
ಎ೦ದು ನಿಟ್ಟುಸಿರು ಬಿಟ್ಟವನ೦ತಿದ್ದ!