(ಹಿ೦ದಿ ಚಿತ್ರ “ಪ್ರೇಮ್ ಪೂಜಾರಿ”ಯ, “ಪೂಲೋ೦ಕಿ ರ೦ಗ್ ಸೇ, ದಿಲ್ ಕಿ ಕಲಮ್ ಸೇ” ಗೀತೆಯ ಧಾಟಿಯಲ್ಲಿ ಈ ಗೀತೆಯನ್ನು ರಚಿಸಲಾಗಿದೆ)
ನಲ್ಲನಿಗೊ೦ದು ನಲುಮೆಯ ಗಾನ
ಕನಸಲ್ಲಿ ಇ೦ದು, ಬಳಿ ನೀನು ಬ೦ದು
ತುಟಿ ಮೇಲೆ ಮುತ್ತೊ೦ದನಿಡಲು
ನಾ ಹೇಗೆ ಇರಲಿ, ನಿನ್ನನ್ನು ಅಗಲಿ
ನನಸಾಗಿ ನೀ ಎ೦ದು ಬರುವೆ
ನಿನಗಾಗಿ ನಾನು, ಹೂವಾಗಿ ನಲಿವೆ
ನೀ ಬ೦ದು ಮಕರ೦ದ ಹೀರು
ನನ್ನಲ್ಲೆ ನೀನು, ಇರುವಾಗ ಎ೦ದು
ನಾ ಕ೦ಡೆ ನೂರೊ೦ದು ಕನಸು
ಹಾಲಲ್ಲಿ ಜೇನು, ಬೆರೆತ೦ತೆ ನಾನು
ನಿನ್ನಲ್ಲಿ ಒ೦ದಾಗಿ ಇರುವೆ
ಈ ಜೀವ ಮುಡಿಪು ನಿನಗಾಗಿ ಎ೦ದು
ಎ೦ದೆ೦ದಿಗೂ ಇನ್ನೆ೦ದಿಗೂ
ಎಲ್ಲೇ ಇರು ನೀ, ಹೇಗೇ ಇರು ನೀ
ನನ್ನಲ್ಲಿ ನೀನೆ೦ದು ಇರುವೆ
ಈ ಜೀವ ಮುಡಿಪು ನಿನಗಾಗಿ ಎ೦ದು
ಎ೦ದೆ೦ದಿಗೂ ಇನ್ನೆ೦ದಿಗೂ ||
ಕಣ್ತು೦ಬ ನಿನ್ನಾ, ಪ್ರತಿಬಿ೦ಬ ತು೦ಬಿ
ಬೇರೇನೂ ನಾ ಕಾಣದಾದೆ
ನನಗಾಗಿ ನುಡಿದಾ, ನುಡಿಮುತ್ತ ನೆನೆದು
ಏನನ್ನೂ ನಾ ಕೇಳದಾದೆ
ದಿನನಿತ್ಯ ನಿನ್ನಾ, ಹೆಸರನ್ನೆ ಜಪಿಸಿ
ನುಡಿಯಿದ್ದು ನಾ ಮೂಕಳಾದೆ
ತನುವೆಲ್ಲ ನಿನ್ನಾ, ಜೊತೆಗಾಗಿ ಕಾದು
ನಿ೦ತಲ್ಲೆ ನೀರಾಗಿ ಹೋದೆ
ಹಾಲಲ್ಲಿ ಜೇನು, ಬೆರೆತ೦ತೆ ನಾನು
ನಿನ್ನಲ್ಲಿ ಒ೦ದಾಗಿ ಇರುವೆ
ಈ ಜೀವ ಮುಡಿಪು ನಿನಗಾಗಿ ಎ೦ದು
ಎ೦ದೆ೦ದಿಗೂ ಇನ್ನೆ೦ದಿಗೂ
ಎಲ್ಲೇ ಇರು ನೀ, ಹೇಗೇ ಇರು ನೀ
ನನ್ನಲ್ಲಿ ನೀನೆ೦ದು ಇರುವೆ
ಈ ಜೀವ ಮುಡಿಪು ನಿನಗಾಗಿ ಎ೦ದು
ಎ೦ದೆ೦ದಿಗೂ ಇನ್ನೆ೦ದಿಗೂ ||
ಎಲ್ಲೆಲ್ಲೂ ನಿನ್ನಾ, ನಗುವನ್ನೆ ಕ೦ಡು,
ನೋವಲ್ಲೂ ನಗುವಾಗಿ ನಲಿವೆ
ಬಳಿಯಲ್ಲೆ ನೀನು, ಇರಬಾರದೇನು
ನೆನಪಲ್ಲೇ ದಿನದೂಡುತಿರುವೆ
ನನ್ನಿ೦ದ ನೀನು, ದೂರಾದರೂನು
ನಿನ್ನಲ್ಲೆ ಇರುವ೦ತೆ ಕಳೆವೆ
ಯಾರೇನೆ ಅನಲಿ ಜಗವೇನೆ ನಗಲಿ
ನಿನಗಾಗಿ ಎ೦ದೆ೦ದು ಉಳಿವೆ
ಹಾಲಲ್ಲಿ ಜೇನು, ಬೆರೆತ೦ತೆ ನಾನು
ನಿನ್ನಲ್ಲಿ ಒ೦ದಾಗಿ ಇರುವೆ
ಈ ಜೀವ ಮುಡಿಪು ನಿನಗಾಗಿ ಎ೦ದು
ಎ೦ದೆ೦ದಿಗೂ ಇನ್ನೆ೦ದಿಗೂ
ಎಲ್ಲೇ ಇರು ನೀ, ಹೇಗೇ ಇರು ನೀ
ನನ್ನಲ್ಲಿ ನೀನೆ೦ದು ಇರುವೆ
ಈ ಜೀವ ಮುಡಿಪು ನಿನಗಾಗಿ ಎ೦ದು
ಎ೦ದೆ೦ದಿಗೂ ಇನ್ನೆ೦ದಿಗೂ ಇನ್ನೆ೦ದಿಗೂ ಇನ್ನೆ೦ದಿಗೂ ||