ಎ೦ದು
ನೀ ಕವಿತೆಯನು
ಎ೦ದು ನೀ ಕವಿತೆಯನು ಬರೆಯದಿರು ಓ ಗೆಳೆಯ
ಭಾವವಿಲ್ಲದ ಭಾವಗೀತೆಯ ||ಎ೦ದು||
ಓದಲಾರೆನು, ಕೇಳಲಾರೆನು
ಹೇಳಲಾರದೇ....... ಮೌನಿಯಾದೆನು ||
ಹಾಡು ಕೇಳುವರ ಮನದಾಳದ.......
ಭಾವ ನೀ ಅರಿಯದೆಯೆ
ಎ೦ದು ನೀ ಕವಿತೆಯನು ಬರೆಯದಿರು ಓ ಗೆಳೆಯ
ಭಾವವಿಲ್ಲದ ಭಾವಗೀತೆಯ ||ಎ೦ದು||
ಇದ್ದರಷ್ಟೆ ಸಾಲದು ಶಬ್ಧಭ೦ಡಾರವು
ಇರಬೇಕು ಅದ...... ಬಳಸೊ ಕೌಶಲ್ಯವು ||
ರತ್ನಕೋಶದಲಿ ಮುತ್ತನಾರಿಸುವ.......
ಕಲೆಯ ನೀ ತಿಳಿಯದೆಯೆ
ಎ೦ದು ನೀ ಕವಿತೆಯನು ಬರೆಯದಿರು ಓ ಗೆಳೆಯ
ಭಾವವಿಲ್ಲದ ಭಾವಗೀತೆಯ ||ಎ೦ದು||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ